ಬಜೆಟ್ 2026
Budget 2026 - Income Tax Expectations: ಫೆಬ್ರುವರಿ 1ರಂದು ಮಂಡನೆಯಾಗುವ ಬಜೆಟ್‌ನಲ್ಲಿ ಹಲವು ನಿರೀಕ್ಷೆಗಳಿವೆ. ಆದಾಯ ತೆರಿಗೆಯಲ್ಲಿ ಕಳೆದ ಬಜೆಟ್‌ನಲ್ಲಿ ಗಣನೀಯ ಇಳಿಕೆ ಮಾಡಲಾಗಿದೆ. ಈ ...
Sector Wise Announcements
Photo Gallery
View Moreಬಜೆಟ್ 2026-27 (ಕೇಂದ್ರ ಬಜೆಟ್)
ಮೋದಿ 3.0 ಸರ್ಕಾರದ ಮೂರನೇ ಪೂರ್ಣ ಬಜೆಟ್ ಫೆಬ್ರವರಿ 1, 2026 ರಂದು ಮಂಡಿಸಬಹುದು. ದೇಶದ ಆರ್ಥಿಕತೆ ಮತ್ತು ಹಣದುಬ್ಬರದ ಪರಿಸ್ಥಿತಿ ಸಕಾರಾತ್ಮಕವಾಗಿದ್ದು, ಇದೇ ಲಯವನ್ನು ಮುಂದುವರಿಸುವ ಮತ್ತು ಇನ್ನಷ್ಟು ಪುಷ್ಟಿಕೊಡುವ ದೃಷ್ಟಿಯಿಂದ ಈ ಬಜೆಟ್ ಮಹತ್ವದ್ದಾಗಿದೆ. ಈ ಬಜೆಟ್‌ನಲ್ಲಿ ಹಲವು ಪ್ರಮುಖ ಘೋಷಣೆಗಳಾಗಬಹುದು ಎಂದು ನಿರೀಕ್ಷಿಸಲಾಗಿದೆ. ರೈತರಿಂದ ಹಿಡಿದು ವೃತ್ತಿಪರರವರೆಗೆ ಎಲ್ಲರಿಗೂ ಪ್ರಮುಖ ಘೋಷಣೆಗಳನ್ನು ನಿರೀಕ್ಷಿಸಲಾಗಿದೆ. ದೇಶದ ಆರ್ಥಿಕತೆಯನ್ನು ಉತ್ತೇಜಿಸುವ ಮತ್ತು ಉತ್ಪಾದನೆಯನ್ನು ಹೆಚ್ಚಿಸಬಲ್ಲಂತಹ ಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತಷ್ಟು ಹಲವು ಸುಧಾರಣಾ ಕ್ರಮಗಳನ್ನು ತರುವ ಬಗ್ಗೆ ಸುಳಿವು ನೀಡಿದ್ದಾರೆ. ಸರ್ಕಾರವು ಈ ಬಜೆಟ್‌ನಲ್ಲಿ ಹೊಸ ಆದಾಯ ತೆರಿಗೆ ಮಸೂದೆಯನ್ನು ಘೋಷಿಸಬಹುದು. 64 ವರ್ಷಗಳ ಹಳೆಯ ಆದಾಯ ತೆರಿಗೆ ಕಾನೂನನ್ನು ತಿದ್ದುಪಡಿ ಮಾಡಲು ಸರ್ಕಾರ ಯೋಜಿಸಿದೆ. ಇದಲ್ಲದೆ, ರೈತರಿಗೆ ಮತ್ತಷ್ಟು ನೆರವಾಗಲು, ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಒದಗಿಸಲಾಗುವ ಮೊತ್ತವನ್ನು ದ್ವಿಗುಣಗೊಳಿಸಬಹುದು. ಜೀವ ಉಳಿಸುವ ಔಷಧಗಳು ಮತ್ತು ಔಷಧೀಯ ವಲಯದ ಬಗ್ಗೆಯೂ ಘೋಷಣೆಗಳನ್ನು ಮಾಡಬಹುದು. ದೇಶದ ಮೂಲಸೌಕರ್ಯಕ್ಕಾಗಿ ಬಂಡವಾಳ ವೆಚ್ಚವನ್ನು ₹11 ಲಕ್ಷ ಕೋಟಿಯಿಂದ ₹15 ಲಕ್ಷ ಕೋಟಿಗೆ ಹೆಚ್ಚಿಸಬಹುದು. ಕಳೆದ ಬಾರಿಯ ಬಜೆಟ್‌ನ ಗಾತ್ರ ₹50.65 ಲಕ್ಷ ಕೋಟಿ ಆಗಿತ್ತು. ಈ ಬಾರಿ, ಅದರ ಗಾತ್ರ ₹60 ಲಕ್ಷ ಕೋಟಿ ಮೀರಬಹುದು ಎನ್ನಲಾಗಿದೆ.
ಭಾರತದ ಬಜೆಟ್‌ನ ಇತಿಹಾಸ 165 ವರ್ಷಗಳ ಹಿಂದಿನದು. ಸ್ವಾತಂತ್ರ್ಯದ ನಂತರ, ಫೆಬ್ರವರಿ ಕೊನೆಯ ದಿನದಂದು ಸಂಜೆ 5 ಗಂಟೆಗೆ ಸಂಸತ್ತಿನಲ್ಲಿ ಬಜೆಟ್ ಅನ್ನು ಓದಲಾಗುತ್ತಿತ್ತು. 1999ರಿಂದ, ಬಜೆಟ್ ಓದುವ ಸಮಯವನ್ನು ಬೆಳಿಗ್ಗೆ 11 ಗಂಟೆಗೆ ಬದಲಾಯಿಸಲಾಯಿತು. 2014 ರಲ್ಲಿ, ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ, ಬಜೆಟ್ ದಿನಾಂಕವನ್ನು ಫೆಬ್ರವರಿ 1 ಕ್ಕೆ ಬದಲಾಯಿಸಲಾಯಿತು. ಹಿಂದೆ, ಬಜೆಟ್ ಪುಸ್ತಕವನ್ನು ಬ್ರೀಫ್‌ಕೇಸ್‌ನಲ್ಲಿ ಇಟ್ಟುಕೊಂಡು ಬರಲಾಗುತ್ತಿತ್ತು. ನಂತರ, ಬ್ರೀಫ್ಕೇಸ್ ಬದಲು ಲೆದರ್ಬ್ಯಾಗ್ ಬಳಕೆ ಆರಂಭವಾಯಿತು. ಈಗ, ಬ್ರೀಫ್ ಕೇಸ್ ಆಗಲೀ ಲೆದರ್ ಬ್ಯಾಗ್ ಆಗಲೀ ಬಳಸಲಾಗುವುದಿಲ್ಲ. ಡಿಜಿಟಲ್ ಟ್ಯಾಬ್ನಲ್ಲೇ ಬಜೆಟ್ ಓದಲಾಗುತ್ತಿದೆ.
ಬಜೆಟ್ 2026-27 ಕ್ಕೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ಉತ್ತರಗಳು
ಪ್ರಶ್ನೆ: 2026-27 ರ ಹಣಕಾಸು ವರ್ಷದ ಬಜೆಟ್ ಅನ್ನು ಯಾವಾಗ ಮಂಡಿಸಲಾಗುತ್ತದೆ?
ಉತ್ತರ: 2026-27 ರ ಹಣಕಾಸು ವರ್ಷದ ಬಜೆಟ್ ಅನ್ನು ಫೆಬ್ರವರಿ 1, 2026 ರಂದು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ.
ಪ್ರಶ್ನೆ: ಮೋದಿ 3.0 ಸರ್ಕಾರದಲ್ಲಿ ಇದು ಎಷ್ಟನೇ ಬಜೆಟ್?
ಉತ್ತರ: ಇದು ಮೋದಿ 3.0 ಸರ್ಕಾರಕ್ಕೆ ಇದು ಮೂರನೇ ಪೂರ್ಣ ಬಜೆಟ್ ಆಗಿರುತ್ತದೆ. ಮೊದಲ ಪೂರ್ಣ ಬಜೆಟ್ ಅನ್ನು ಜುಲೈ 2024 ರಲ್ಲಿ ಮಂಡಿಸಲಾಯಿತು.
ಪ್ರಶ್ನೆ: ಬಜೆಟ್‌ನಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಸರ್ಕಾರ ಕ್ರಮ ಪ್ರಕಟಿಸಬಹುದಾ?
ಉತ್ತರ: ಸರ್ಕಾರ ಮತ್ತು ಆರ್‌ಬಿಐ ಹಣದುಬ್ಬರ ನಿಯಂತ್ರಣಕ್ಕೆ ಸಾಕಷ್ಟು ಪ್ರಯಾಸ ಪಟ್ಟಿವೆ. ಈ ಬಾರಿಯೂ ಹಣದುಬ್ಬರ ನಿಯಂತ್ರಿಸಲು ಹಲವು ಕ್ರಮ ಪ್ರಕಟಿಸಬಹುದು.
ಪ್ರಶ್ನೆ: ಬಜೆಟ್‌ನಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಘೋಷಣೆ ಮಾಡುವ ಸಾಧ್ಯತೆ ಇದೆಯೇ?
ಉತ್ತರ: ಬಜೆಟ್‌ನಲ್ಲಿ ಹೊಸ ಆದಾಯ ತೆರಿಗೆ ಮಸೂದೆಯನ್ನು ಪರಿಚಯಿಸಲು ಸರ್ಕಾರ ಯೋಜಿಸುತ್ತಿದೆ. ಸಾಮಾನ್ಯ ತೆರಿಗೆದಾರರಿಗೆ ಅನುಕೂಲವಾಗಬಲ್ಲ ಅಂಶಗಳು ಇದರಲ್ಲಿ ಇರಬಹುದು ಎಂದು ನಿರೀಕ್ಷಿಸಲಾಗಿದೆ.
ಪ್ರಶ್ನೆ: ರೈತರು ಈ ಬಜೆಟ್‌ನಲ್ಲಿ ಏನು ನಿರೀಕ್ಷಿಸಬಹುದು?
ಉತ್ತರ: ಈ ಬಾರಿಯ ಬಜೆಟ್‌ನಲ್ಲಿ, ರೈತರಿಗೆ ಪ್ರಮುಖ ಘೋಷಣೆಗಳ ಸಾಧ್ಯತೆಯಿದೆ. ಪ್ರಧಾನ ಮಂತ್ರಿ ಕಿಸಾನ್ ನಿಧಿಯ ಮೊತ್ತವನ್ನು ದ್ವಿಗುಣಗೊಳಿಸಬಹುದು. ವರ್ಷಕ್ಕೆ 6,000 ರೂ ಇರುವ ಮೊತ್ತವನ್ನು 12,000 ರೂಗೆ ಏರಿಸಬಹುದು ಎಂದು ಹೇಳಲಾಗುತ್ತಿದೆ.
ಪ್ರಶ್ನೆ: ಬಜೆಟ್‌ಗೆ ಮೊದಲು ಹಲ್ವಾ ಸಮಾರಂಭ ಯಾಕೆ
ಉತ್ತರ: ಭಾರತದಲ್ಲಿ ಯಾವುದೇ ಶುಭ ಕಾರ್ಯಕ್ರಮದ ಮೊದಲು ಸಿಹಿತಿಂಡಿಗಳನ್ನು ತಿನ್ನುವ ಸಂಪ್ರದಾಯವಿದೆ. ಆದ್ದರಿಂದ, ಬಜೆಟ್‌ಗೆ ಮೊದಲು ಹಲ್ವಾ ಸಮಾರಂಭ ನಡೆಸಲಾಗುತ್ತದೆ.
ಪ್ರಶ್ನೆ: ಬಜೆಟ್‌ನಲ್ಲಿ ತೆರಿಗೆ ಸ್ಲ್ಯಾಬ್‌ಗಳಲ್ಲಿ ಮೊದಲ ಬದಲಾವಣೆ ಯಾವಾಗ ಮಾಡಲಾಯಿತು?
ಉತ್ತರ: ಭಾರತದ ಸ್ವಾತಂತ್ರ್ಯದ ನಂತರ ತೆರಿಗೆ ಸ್ಲ್ಯಾಬ್‌ಗಳಲ್ಲಿ ಮೊದಲ ಬದಲಾವಣೆ ಕಂಡುಬಂದದ್ದು 1949-50ರ ದಶಕದಲ್ಲಿ
ಪ್ರಶ್ನೆ: ಕೊನೆಯ ಬಾರಿಗೆ ಪ್ರತ್ಯೇಕ ರೈಲ್ವೆ ಬಜೆಟ್ ಯಾವಾಗ ಮಂಡಿಸಲಾಯಿತು?
ಉತ್ತರ: ದೇಶದಲ್ಲಿ ಕೊನೆಯ ರೈಲ್ವೆ ಬಜೆಟ್ ಅನ್ನು ರೈಲ್ವೆ ಸಚಿವ ಸುರೇಶ್ ಪ್ರಭು ಅವರು 2016ರ ಫೆಬ್ರುವರಿಯಲ್ಲಿ ಮಂಡಿಸಿದರು. ಅದರ ನಂತರ, ಸಾಮಾನ್ಯ ಬಜೆಟ್ ಜೊತೆ ರೈಲ್ವೆ ಬಜೆಟ್ ಅನ್ನು ವಿಲೀನಗೊಳಿಸಲಾಯಿತು.